ಪಯೊನೀರ್ ಶೋಧಗಳು '
ಸೌರವ್ಯೂಹದ ಅನ್ವೇಷಣೆಗೆ ಅಮೆರಿಕ ಸಂಯುಕ್ತ ಸಂಸ್ಥಾನ ಬಳಸಿದ ಮತ್ತು ಬಳಸುತ್ತಿರುವ ಆಕಾಶನೌಕೆಗಳು (ಪಯೋನೀರ್ ಪ್ರೋಬ್ಸ್). ಮೊದ ಮೊದಲ (1958) ಪಯೊನೀರ್ ಶೋಧಗಳೆಲ್ಲ (ಪಯೊನೀರ್ 4ರ ಪೂರ್ತ) ಚಂದ್ರಾನ್ವೇಷಣೆಗೆ ಸೀಮಿತವಾಗಿದ್ದುವು.  ಅವುಗಳ ಪೈಕಿ ಯಾವುದೊಂದೂ ಯಶಸ್ವಿಯಾಗಲಿಲ್ಲ. ಆ ಬಳಿಕ ಬಳಸಿದ 5, 6, 7, 8 ಮತ್ತು 9ನೆಯ ಪಯೊನೀರುಗಳನ್ನು ಗ್ರಹಾಂತರ ಅನುಶ್ರವಣಕ್ಕೆ (ಇಂಟರ್ ಪ್ಲ್ಯಾನೆಟರಿ ಮಾನಿಟರಿಂಗ್) ಬೇಕಾದ ಶೋಧಗಳಾಗಿ ಬಳಸಿಕೊಂಡು ಸೌರಚಂಡಮಾರುತಗಳಿಂದ ಹೊರಹೊಮ್ಮುವ ವಿಕಿರಣವನ್ನೂ ಗ್ರಹಾಂತರ ಕಾಂತಕ್ಷೇತ್ರದಲ್ಲಿ ಉಂಟಾಗುವ ವೈಪರೀತ್ಯಗಳನ್ನೂ ಅಳೆಯಲಾಯಿತು.  ಸೌರಚಂಡಮಾರುತಗಳಿಂದ ಆಕಾಶಯಾನಿಗಳಿಗೆ ಒದಗಬಹುದಾದ ಅಪಾಯಗಳನ್ನು ಅರಿತುಕೊಳ್ಳುವುದೂ ಭೂಮಿಯಿಂದ ಆಚೆಗೆ ಮುಖ ಮಾಡಿರುವ ಸೂರ್ಯನ ಇನ್ನೊಂದು ಪಾಶ್ರ್ವವನ್ನು ಅನುಶ್ರವಣ ಮಾಡಿ ಸೂರ್ಯನ ಆದರ್ಶನೆಯ ಸಲುವಾಗಿ ಉಂಟಾಗುವ ಸೌರ ಸ್ಫೋಟಗಳ ಬಗ್ಗೆ ಮುನ್ಸೂಚನೆ ನೀಡುವುದೂ ಈ ಶೋಧಗಳಿಂದ ಸಾಧ್ಯವಾಗಿದೆ.

			ಪಯೋನೀರ್ ಆಕಾಶಶೋಧಕ ನೌಕೆಗಳನ್ನು ಕುರಿತು ಕೆಲವು ವಿವರಗಳು
ನೌಕೆಯ ಹೆಸರು	       ಉಡಾವಣೆಯ	                	      ಹಾರಾಟದ ವಿವರ 
                    ತಾರೀಖು
ಪಯೊನೀರ್		17-8-1958		ಉಡಾವಣೆ ಯಶಸ್ವಿಯಾಗಲಿಲ್ಲ
ಪಯೊನೀರ್ 1       11-10-1958	 	ಚಂದ್ರನ ಸುತ್ತಲೂ ಕಕ್ಷಿಸಲು ನಿಯೋಜಿತ. ದೂರದರ್ಶನ
	ಚಿತ್ರಗಳನ್ನು ಪಡೆಯುವುದು.  ಸಾಕಷ್ಟು ನೂಕುಬಲವಿಲ್ಲದೆ ಹೋದ 	ಕಾರಣ 	ಭೂಮಿಯಿಂದ 113,800 ಕಿಮೀಗಳಷ್ಟು ಮಾತ್ರ ಮೇಲೆ 	ಹೋಯಿತು. ವ್ಯಾನ್ ಅಲೆನ್ ವಿಕಿರಣ ಪಟ್ಟಿಯ ವ್ಯಾಪ್ತಿಯ ನಕ್ಷಾ 		ನಿರೂಪಣೆ.
ಪಯೊನೀರ್ 2		8-11-1958		ಉಡಾವಣೆ ಯಶಸ್ವಿಯಾಗಲಿಲ್ಲ
ಪಯೊನೀರ್ 3        	6-12-1958		ಚಂದ್ರನ ಸಮೀಪದಲ್ಲಿಯ ಹಾರಾಟಕ್ಕೆ ನಿಯೋಜಿತ.
	ಸಾಕಷ್ಟು ನೂಕುಬಲವಿಲ್ಲದೆ ಹೋದ ಕಾರಣ ಭೂಮಿಯಿಂದ 	102,300 ಕಿಮೀ. ಗಳಷ್ಟು ಮಾತ್ರ ಮೇಲೆ ಹೋಯಿತು. ವ್ಯಾನ್ 	ಅಲೆನ್ ವಿಕಿರಣ ಪಟ್ಟಿಗಳ ತೀವ್ರತೆಯಲ್ಲಿಯ ವೈಪರೀತ್ಯಗಳ ಶೋಧ.
ಪಯೊನೀರ್ 4		3-3-1959		ಚಂದ್ರನಿಂದ 60,000 ಕಿಮೀಗಳ ದೂರದಲ್ಲಿ ಹಾರಿತು.
ಪಯೊನೀರ್ 		26-11-1959		ಚಂದ್ರನ ಸುತ್ತಲೂ ಕಕ್ಷಿಸಲು ನಿಯೋಜಿತ. ಉಡಾವಣೆ 
							ಯಶಸ್ವಿಯಾಗಲಿಲ್ಲ.
ಪಯೊನೀರ್ 5		11-3-1960		ಗ್ರಹಾಂತರಶೋಧಕನೌಕೆ :  ಭೂಮಿ ಮತ್ತು ಶುಕ್ರ ಗ್ರಹಗಳ ಕಕ್ಷಗಳ 							ನಡುವೆ 	ಸೂರ್ಯನನ್ನು ಕಕ್ಷಿಸುತ್ತಿದೆ. ಸೌರ ಚಂಡಮಾರುತ ಹಾಗೂ 						ಸೌರಕಣಗಳ ಬಗ್ಗೆ ಮಾಹಿತಿಯನ್ನು 1960ರ ಜೂನ್ 2ರ ತನಕವೂ 						ಭೂಮಿಗೆ ರವಾನಿಸಿತು.
ಪಯೊನೀರ್		25-9-1960		ಚಂದ್ರನ ಸುತ್ತಲೂ ಕಕ್ಷಿಸಲು ನಿಯೋಜಿತ. ಉಡಾವಣೆ 								ಯಶಸ್ವಿಯಾಗಲಿಲ್ಲ.
ಪಯೊನೀರ್		15-12-1960	ಚಂದ್ರನ ಸುತ್ತಲೂ ಕಕ್ಷಿಸಲು ನಿಯೋಜಿತ. ಉಡಾವಣೆ 								ಯಶಸ್ವಿಯಾಗಲಿಲ್ಲ.
ಪಯೊನೀರ್  6		16-12-1960		ಗ್ರಹಾಂತರ ಶೋಧಕ ನೌಕೆ ಭೂಮಿ ಮತ್ತು ಶುಕ್ರ ಕಕ್ಷೆಗಳ ನಡುವೆ ¸							ಸೂರ್ಯನನ್ನು ಕಕ್ಷಿಸುತ್ತಿದೆ.
ಪಯೊನೀರ್  7	17-8-1966	ಗ್ರಹಾಂತರಶೋಧಕನೌಕೆ : ಭೂಮಿ ಮತ್ತು ಮಂಗಳ ಕಕ್ಷೆಗಳ ನಡುವೆ 		ಸೂರ್ಯನನ್ನು ಕಕ್ಷಿಸುತ್ತಿದೆ.   ಪಯೊನೀರ್ 6 	ರಂತೆಯೇ ಸೌರ 			ಚಟುವಟಿಕೆಗಳ ಬಗ್ಗೆ ಅಧ್ಯಯನ.
ಪಯೊನೀರ್  8		13-12-1967		ಗ್ರಹಾಂತರ ಶೋಧಕನೌಕೆ.  ಸೂರ್ಯನ ಸುತ್ತ ಭೂಕಕ್ಷೆಗಿಂತ ಸ್ವಲ್ಪ  º						ಹೊರಗೆ ಸೂರ್ಯನನ್ನು  ಕಕ್ಷಿಸುತ್ತಿದೆ.
ಪಯೊನೀರ್	98-11-1968	ಗ್ರಹಾಂತರ ಶೋಧಕನೌಕೆ.  ಭೂಮಿ ಮತ್ತು ಶುಕ್ರ ಗ್ರಹಗಳ ಕಕ್ಷೆಗಳನ್ನು 		ಅಡ್ಡಹಾಯುತ್ತ ಸೂರ್ಯನನ್ನು ಕಕ್ಷಿಸುತ್ತಿದೆ.
ಪಯೊನೀರ್ ಇ		27-8-2969		ಗ್ರಹಾಂತರ ಅನುಶ್ರವಣಕ್ಕೆ ನಿಯೋಜಿತ. ಉಡಾವಣೆ 								ಯಶಸ್ವಿಯಾಗಲಿಲ್ಲ.
ಪಯೊನೀರ್ 10		3-3-1972		1973 ಡಿಸೆಂಬರ್ 3ರಂದು ಗುರುಗ್ರಹವನ್ನು	130,000 ಕಿಮೀ 						ದೂರದಲ್ಲಿ ಹಾದುಹೋಯಿತು. ಅಂತಿಮವಾಗಿ ಸೌರವ್ಯೂಹದ ಆಚೆಗೆ 						ಸಾಗುವ ಪಥದಲ್ಲಿ ಈ ನೌಕೆ ಸಾಗುತ್ತಿದೆ.
ಪಯೊನೀರ್  11	5-4-1973		1974ರ ಡಿಸೆಂಬರ್ 3ರಂದು ಗುರುಗ್ರಹವನ್ನು 43,000 ಕಿಮೀ 						ದೂರದಲ್ಲಿ ಹಾದುಹೋಯಿತು.  1979ರ ಸೆಪ್ಟಂಬರ್ 1ರಂದು 							ಶನಿಗ್ರಹವನ್ನು 21,400 ಕಿಮೀ ದೂರದಲ್ಲಿ ಹಾದು ಹೋಯಿತು.

	ಪಯೊನೀರ್  ಶ್ರೇಣಿಯಲ್ಲಿ ಇನ್ನೂ ನಾಲ್ಕು ಶೋಧಗಳನ್ನು ಉಡಾಯಿಸಿ ಅವು ಶುಕ್ರ ಗ್ರಹವನ್ನು ಕಕ್ಷಿಸುವಂತೆ ಮಾಡಿ, ಆ ಕಕ್ಷೆಗಳಿಂದ ಉಪಶೋಧಗಳನ್ನು ಉಡಾಯಿಸಿ ಶುಕ್ರಗ್ರಹದ ಅನಿಲಾಚ್ಛಾದಿತ ವಲಯದ ಅನ್ವೇಷಣೆಯನ್ನು ಮಾಡುವಂತೆ ನಿಯೋಜಿಸಲಾಗಿತ್ತು.

	ಪಯೊನೀರ್ ಮಾಲೆಯಲ್ಲಿ ಉಡಾಯಿಸಿದ ಶೋಧಗಳ ಪೈಕಿ ಪಯೊನೀರ್ 10 (1972) ಮತ್ತು ಪಯೊನೀರ್  11 (1973) ಎಂಬವು ಗುರುಗ್ರಹವನ್ನು ತೀರ ಸಮೀಪದಲ್ಲಿ ಹಾದು ಹೋದ ಮೊತ್ತಮೊದಲು ಆಕಾಶ ಶೋಧಗಳು. ಪಯೊನೀರ್ 10 ನೌಕೆಯ ಆ್ಯಂಟನಕ್ಕೆ 1.5 ಸೆಂಮೀ ಘಿ 22.5 ಸೆಂಮೀ ಗಾತ್ರದ ಚಿನ್ನಲೇಪಿತ ಅಲ್ಯೂಮಿನಿಯಮ್ ಫಲಕವನ್ನು ತೂಗುಹಾಕಲಾಗಿತ್ತು. ಈ ಫಲಕದ ಮೇಲೆ ನಾನಾ ಬಗೆಯ ವೃತ್ತಗಳನ್ನೂ ರೇಖೆಗಳನ್ನೂ ಆಕೃತಿಗಳನ್ನೂ ನಗ್ನ ಗಂಡುಹೆಣ್ಣುಗಳನ್ನೂ ಬಿಡಿಸಲಾಗಿತ್ತು. ಭೂವಾಸಿಗಳು ಭೂಮ್ಯತೀತ ಜೀವಿಗಳಿಗೆ ಕಳುಹಿಸಿದ ಮೊತ್ತಮೊದಲ ಉದ್ದೇಶಪೂರ್ವಕ ಹಾಗೂ ಸ್ನೇಹ ಸಂದೇಶ ಈ ಫಲಕ. ಹೈಡ್ರೋಜನ್ ಪರಮಾಣುವನ್ನು ಸೂಚಿಸುವ ಎರಡು ವೃತ್ತಗಳು ಫಲಕದ ಎಡ-ಮೇಲುಭಾಗದಲ್ಲಿ; ಭೂಮಿಗೆ ಸಾಪೇಕ್ಷವಾಗಿರುವ ಕ್ವಾಸಾರ್ ನಕ್ಷತ್ರಗಳ ಸ್ಥಾನವನ್ನು ನಿರ್ದೇಶಿಸುವ ಬಾಹ್ಯಗತ್ಯಾತ್ಮಕ ರೇಖೆಗಳು ಎಡ-ನಡುಭಾಗಗಳಲ್ಲಿ.  ಸೌರವ್ಯೂಹದ ಕಾಯಗಳನ್ನು ಸೂಚಿಸುವ ವೃತ್ತಗಳು ಕೆಳಭಾಗದಲ್ಲಿ ಮತ್ತು ಪಯೊನೀರ್ ಆಕಾರವನ್ನೂ ಮನುಷ್ಯರ ಆಕಾರಗಳನ್ನೂ ಬಲಭಾಗದಲ್ಲಿ ಸೂಚಿಸಲಾಗಿತ್ತು.  ಯಾರಾದರೂ ಭೂಮ್ಯತೀತ ಜೀವಿಗಳು ಪಡೆಯಲಿ ಎಂಬ ಉದ್ದೇಶದಿಂದ ಈ ಫಲಕವನ್ನು ನೌಕೆಯ ಮೇಲೆ ಇಡಲಾಗಿತ್ತಾದರೂ ಇದೆಂದಾದರೂ ಸಿದ್ಧಿಸೀತೇ ಎಂಬುದು ಸಂದೇಹಾಸ್ಪದ. ಗುರು ಮತ್ತು ಶನಿಗ್ರಹಗಳನ್ನು ಈಗಾಗಲೇ (1979) ಹಾದು ಹೋಗಿರುವ ಈ ನೌಕೆ ಮುಂದೆ ಯುರೇನಸ್, ನೆಪ್ಚೂನ್ ಮತ್ತು ಪ್ಲೂಟೋ ಗ್ರಹಗಳನ್ನು ಹಾದು ಸೂರ್ಯ ಗುರುತ್ವಾಕರ್ಷಣೆಯನ್ನು ತಪ್ಪಿಸಿಕೊಂಡು ಬಾಹ್ಯಾಕಾಶದ ನಕ್ಷತ್ರಲೋಕದಲ್ಲಿ ವಿಹರಿಸುತ್ತದೆ. ಎಂದೂ ಬಾಹ್ಯಾಕಾಶದಲ್ಲಿ ಸವೆತದ ದರ ಕಡಿಮೆ ಇರುವುದರ ಕಾರಣ ಈ ನೌಕೆಗೆ ಲಗತ್ತಿಸಿರುವ ಫಲಕದ ಸಂದೇಶ ಅನೇಕ ದಶಲಕ್ಷ ವರ್ಷಗಳ ತನಕವೂ ಉಳಿದು ಬರುತ್ತದೆ ಎಂದೂ ವಿಜ್ಞಾನಿಗಳು ಊಹಿಸಿದ್ದಾರೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ